ಅಸನ್‍ಸಾಲ್
ಪಶ್ಚಿಮಬಂಗಾಲದ ಬರ್ದ್‍ವಾನ್ ಜಿಲ್ಲೆಯ, ದಾಮೋದರ್ ನದೀಕಣಿವೆಯಲ್ಲಿರುವ ಒಂದು ನಗರ. ರಾಣಿಗಂಜ್ ಕಲ್ಲಿದ್ದಲು ಗಣಿಗಳ ಹತ್ತಿರ, ಪೂರ್ವರೇಲ್ವೆಯಲ್ಲಿ, ಕಲ್ಕತ್ತಾದಿಂದ 212 ಕಿ.ಮೀ. ದೂರದಲ್ಲಿದೆ. ವಿಸ್ತೀರ್ಣ 4 ಚದರ ಮೈ. ಜನಸಂಖ್ಯೆ 2,22,000(1991). ಗ್ರಾಂಡ್ ಟ್ರಂಕ್ ರಸ್ತೆ ನಗರದ ಪೂರ್ವದಿಂದ ಪಶ್ಚಿಮಕ್ಕೆ ಹಾದು ಹೋಗುತ್ತದೆ. ಒಂದು ಕೈಗಾರಿಕಾನಗರ, ಕಲ್ಲಿದ್ದಲ್ಲಿನ ಮಾರಾಟ ಕೇಂದ್ರ. ಮುಖ್ಯರೇಲ್ವೆ ನಿಲ್ದಾಣ. ಇಲ್ಲಿ ಒಂದು ರೇಲ್ವೆ ಕಾಲೋನಿ ಮತ್ತು ಕಾರ್ಯಾಗಾರಗಳಿವೆ. ಉಪನಗರವಾದ ಜಿಕೆ ನಗರದಲ್ಲಿ ದೊಡ್ಡ ಅಲ್ಯೂಮಿನಿಯಂ ಕಾರ್ಖಾನೆ ಇದೆ. ದೊಡ್ಡ ದೊಡ್ಡ ಕಬ್ಬಿಣದ ಕುಲುಮೆಗಳಿವೆ. ರಾಸಾಯನಿಕ ಹಾಗೂ ತಾಂತ್ರಿಕ ವಸ್ತುಗಳನ್ನು ಉತ್ಪಾದಿಸುತ್ತಾರೆ.   				
					(ಕೆ.ಎನ್.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ